ಜಯಶ್ರೀ ಬ್ಯಾನರ್ಜಿ (ಜನನ ೨ ಜುಲೈ ೧೯೩೮ ) ಮಧ್ಯಪ್ರದೇಶದ ಭಾರತೀಯ ಜನತಾ ಪಕ್ಷದ ನಾಯಕಿ ಮತ್ತು ಮಾಜಿ ಸಂಸದೆ. ಅವರು ೧೯೭೨ ಜನಸಂಘದರಲ್ಲಿ ಜಬಲ್ಪುರ್ ಕಂಟೋನ್ಮೆಂಟ್ ಸ್ಥಾನದಿಂದ ಸದಸ್ಯರಾಗಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರು ೧೯೭೭ ರಲ್ಲಿ ಮಧ್ಯಪ್ರದೇಶ ವಿಧಾನಸಭೆಗೆ ಚುನಾಯಿತರಾದರು (ಜಬಲ್ಪುರ್ ಸೆಂಟ್ರಲ್, ಜನತಾ ಪಕ್ಷದ ಸದಸ್ಯ, ಬಿಜೆಪಿ ಪೂರ್ವದ ದಿನಗಳು). ಅವರು ೧೯೭೭ ರಿಂದ ೧೯೮೦ ರವರೆಗೆ ಮಧ್ಯಪ್ರದೇಶ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ೧೩ ನೇ ಲೋಕಸಭೆಯ ಸದಸ್ಯರಾಗಿದ್ದರು.೧೯೯೯-೨೦೦೦ ರಲ್ಲಿ ಜಬಲ್ಪುರದಿಂದ ಚುನಾಯಿತರಾಗಿದ್ದರು. ಅವರು ಪ್ರಸ್ತುತ ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಅತ್ತೆ. == ಉಲ್ಲೇಖಗಳು ==